ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
`ಸುಜನಾ`ಗೆ ಅಳಿಕೆ ರಾಮಯ್ಯ ದತ್ತಿನಿಧಿ ಪ್ರಶಸ್ತಿ

ಲೇಖಕರು : ಪ್ರಜಾವಾಣಿ
ಸೋಮವಾರ, ಫೆಬ್ರವರಿ 17 , 2014
ಫ಼ೆಬ್ರವರಿ 17, 2014

`ಸುಜನಾ`ಗೆ ಅಳಿಕೆ ರಾಮಯ್ಯ ದತ್ತಿನಿಧಿ ಪ್ರಶಸ್ತಿ

ಸುಳ್ಯ: : ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಕೊಡಮಾಡುವ ರಾಮಯ್ಯ ದತ್ತಿನಿಧಿ ಪ್ರಶಸ್ತಿಯನ್ನು ಸುಳ್ಯದ ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯರವರಿಗೆ ಅವರ ಸ್ವಗೃಹ ಸುಳ್ಯದ ರಂಗಮನೆಯಲ್ಲಿ ಶುಕ್ರವಾರ ಪ್ರದಾನ ಮಾಡ­ಲಾಯಿತು.

ಕರಾವಳಿಯ ಅನೇಕ ಪ್ರಸಿದ್ಧ ಮೇಳಗಳಲ್ಲಿ 36 ವರ್ಷ ಯಕ್ಷಗಾನ ಸೇವೆಗೈದು ಯಕ್ಷಗಾನದ ಸವ್ಯ­ಸಾಚಿ ಎನಿಸಿಕೊಂಡ ಸುಜನಾ ಅವರಿಗೆ ಈ ಪ್ರಶಸ್ತಿಯನ್ನು ಅಳಿಕೆ ರಾಮಯ್ಯ ರೈ ಅವರ ಪುತ್ರರಾದ ಬಾಲಕೃಷ್ಣ ರೈ, ದುರ್ಗಾಪ್ರಸಾದ್ ರೈ, ಅಳಿಯ ಮಹಾಬಲ ರೈ, ರಶ್ಮಿ ದುರ್ಗಾಪ್ರಸಾದ್ ಮತ್ತು ಟ್ರಸ್ಟಿನ ಗೌರವ ಸದಸ್ಯರಾದ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಇವರು ಫಲಪುಷ್ಪ, ಶಾಲು, ಸನ್ಮಾನ ಫಲಕ ಮತ್ತು ₨ 10,000ದೊಂದಿಗೆ ಸನ್ಮಾನಿಸಿದರು.

ಉಬರಡ್ಕ ಉಮೇಶ್ ಶೆಟ್ಟಿಯವರು ಸುಜನಾರ ಅವರೊಂದಿಗಿನ ಅವರ ಯಕ್ಷರಂಗದ ಒಡನಾಟವನ್ನು ಭಾವಪೂರ್ಣವಾಗಿ ನೆನಪಿಸಿಕೊಂಡರು. ಸಾಹಿತಿ­ಗಳಾದ ಪ್ರಭಾಕರ ಶಿಶಿಲ, ಸುಂದರ ಕೇನಾಜೆ, ಎಂ.ಜಿ.ಕೆ.ಆಚಾರ್ಯ, ಸುಜನಾ ಪುತ್ರ ಜೀವನ್‌­­ರಾಂ ಸುಳ್ಯ, ಸೊಸೆ ಮೌಲ್ಯ ಜೀವನ್ ಮತ್ತಿತರರಿದ್ದರು.

ಕೃಪೆ : http://www.prajavani.net

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ